ಕಲಿಯುಳ್ಳವನಾಗಿ ಕಟ್ಟಿದೆನು ಬ್ರಹ್ಮನ ಮೇಲೆ ಬಿರಿದ.
ನಿತ್ಯವುಳ್ಳವನಾಗಿ ಕಟ್ಟಿದೆನು ವಿಷ್ಣುವಿನ ಮೇಲೆ ಬಿರಿದ.
ಅವಿರಳ ತತ್ವದಲ್ಲಿ ನಿಂದು, ಬಂದ ಭವಪಾಶಂಗಳ ಹರಿದು
ಕುಂದು ಹೆಚ್ಚಿಲ್ಲದೆ ಸಂದೇಹವನತಿಗಳೆದು ಕಟ್ಟಿದೆನು.
ಎನ್ನ ಕರಣಂಗಳ ಕಟ್ಟಿದೆನಾಗಿ
ರುದ್ರನ ಮೇಲೆ ಕಟ್ಟಿದೆನು ಬಿರಿದ.
ಅಮುಗೇಶ್ವರಲಿಂಗವು ಅಪ್ಪಿಕೊಂಡ ಭಾಷೆ.