Index   ವಚನ - 39    Search  
 
ಕಳ್ಳೆಯ ಸಂಗವ ಮಾಡಿ, ಕಾಯವಿಕಾರವ ಮುಂದುಗೊಂಡು ನಿಜವಲ್ಲಭನ ಅರಿದೆನೆಂಬ ಕರ್ಮಿಗಳ ನೋಡಾ; ಘಟ ಹರಿದವನಂತೆ ಸಟೆದಿಟವನಾಡುವಿರಿ, ಪಶುಪತಿಯ ಅರಿವೆನೆಂಬ ಪಾಷಂಡಿಗಳ ಮೆಚ್ಚುವನೆ ಅಮುಗೇಶ್ವರ?