Index   ವಚನ - 46    Search  
 
ಕಿರಿ ಕಿರಿದ ನುಡಿದು ಮರಣಕ್ಕೆ ಒಳಗಾಗುವರ ಗಂಡ. ಬ್ರಹ್ಮವ ನುಡಿದು ಬ್ರಹ್ಮನ ಬಲೆಯಲ್ಲಿ ಸಿಲುಕುವ ಭವಿಗಳ ಗಂಡ. ನಿತ್ಯವ ನುಡಿದು ವಿಷ್ಣುವಿನ ಬಲೆಯಲ್ಲಿ ಸಿಲುಕುವ ವಿಕಾರಿಗಳ ಗಂಡ. ಅಮುಗೇಶ್ವರಲಿಂಗವನರಿಯದ ಅಜ್ಞಾನಿಗಳ ಗಂಡ.