Index   ವಚನ - 52    Search  
 
ಗರುಡಿಯಲ್ಲಿ ಸಾಮುವ ಮಾಡುವರಲ್ಲದೆ, ಕಾಳಗದಲ್ಲಿ ಸಾಮುವ ಮಾಡುವರೆ? ಆದ್ಯರ ವಚನಂಗಳ, ಅರಿವು ಸಂಬಂಧಿಗಳಲ್ಲಿ ಅರಿದಬಳಿಕ ಬಿಡಬೇಕು. ಅವರು ಕಡುಗಲಿಗಳಾಗಿ ಆಚರಿಸುವ ನಿಜವಿರಕ್ತರ ಎನಗೊಮ್ಮೆ ತೋರಾ ಅಮುಗೇಶ್ವರಾ.