ಇದ್ದು ಜೀವನಲ್ಲ, ಸತ್ತು ಹೆಣನಲ್ಲ.
ಕತ್ತಲೆ ಮುಟ್ಟಿದ ಬೆಳಗಿನಲ್ಲಿ ಸುಳಿಯದು.
ಹಿಂದಾದಡೆ ಏರುವುದು, ಮುಂದಾದಡೆ ತೋರುವುದು.
ಹಿಡಿಯಲ್ಲ ಕರಿಯಲ್ಲ. ಇಕ್ಕಿದ ಹೆಜ್ಜೆಯ ತೆಗೆಯದು.
ಮೊನೆಗೆ ನಿಲ್ಲದು, ತೆಕ್ಕೆಗೆ ಬಾರದು.
ಕಾದಬಂದ ಕಲಿಗಳನೆಲ್ಲರ ಅಗಿದಗಿದು ನುಂಗಿತ್ತು ನೋಡಾ.
ಅರಿದೆಹೆನೆಂದಡೆ ಅರಿಯಬಾರದು. ಇದ ಬಲ್ಲವರಾರಯ್ಯಾ ?
ಇಹಪರ ನಷ್ಟವಾದ ಮಹಾವೀರಧೀರರಿಗಲ್ಲದೆ
ಮುಕ್ತಿಗೆ ದೂರವಾದ ಲಿಂಗಾಂಗಿಗಳ ನೆನಹೆಂಬ ಜೋಡಂ ತೊಟ್ಟು,
ಅವರ ಕರಣಪ್ರಸಾದವೆಂಬ ವಜ್ರ ಘಟಿಕೆಯ ಧರಿಸಿ,
ಗುರುಕರುಣವೆಂಬ ಅಲಗಂ ಪಿಡಿದು,
ಮುಂಡ ಬಿದ್ದಡೂ ತಲೆಯಲ್ಲಿರಿವೆ.
ನಿಜಗುರು ಭೋಗೇಶ್ವರಾ ನಾ ನಿಮ್ಮ ಬೇಡುವನಲ್ಲಾ.
Art
Manuscript
Music
Courtesy:
Transliteration
Iddu jīvanalla, sattu heṇanalla.
Kattale muṭṭida beḷaginalli suḷiyadu.
Hindādaḍe ēruvudu, mundādaḍe tōruvudu.
Hiḍiyalla kariyalla. Ikkida hejjeya tegeyadu.
Monege nilladu, tekkege bāradu.
Kādabanda kaligaḷanellara agidagidu nuṅgittu nōḍā.
Aridehenendaḍe ariyabāradu. Ida ballavarārayyā?
Ihapara naṣṭavāda mahāvīradhīrarigallade
muktige dūravāda liṅgāṅgigaḷa nenahemba jōḍaṁ toṭṭu,
avara karaṇaprasādavemba vajra ghaṭikeya dharisi,
gurukaruṇavemba alagaṁ piḍidu,
muṇḍa biddaḍū taleyallirive.
Nijaguru bhōgēśvarā nā nim'ma bēḍuvanallā.