Index   ವಚನ - 13    Search  
 
ಜಾಳೇಂದ್ರದೇಶದ ಅರಸು ಆನೆಯನೇರಿ, ನಾಯಕ ಪಾಯಕ ಮಾವತಿಗರ ತಳತಂತ್ರ ಮಾರ್ಬಲ ಸಹಿತ ರಾಜಬೀದಿಯೊಳು ಬರುತಿರಲು, ಹೆಜ್ಜೆಗಾಣದೆ ತಳಿತಕಾರೆಯ ಮೆಳೆಯೊಳಗಿಪ್ಪ ಬಿಜ್ಜು ಅರಸು, ಆನೆ ಮೊದಲಾದ ತಳತಂತ್ರ ಮಾರ್ಬಲನ ನುಂಗಿತ್ತ ಕಂಡೆ. ಎರಡೂರ ಬಟ್ಟೆ, ಒಂದಾದ ತಲೆವೊಲದಲ್ಲಿ ಒಬ್ಬ ತನ್ನ ತಲೆಯ ಕೊಯ್ದು ಮುಂದಿರಿಸಿಕೊಂಡು ಮುಂಡದಲಿ ಹೇನ ಕಳವುದ ಕಂಡೆ. ಅಂಗವ ಕೈಯಲ್ಲಿ ಹಿಡಿದುಕೊಂಡು ಅರಸಿ ಬಳಲುತ್ತಿರೆ ಹಲಬರು. ನಿಜಗುರು ಭೋಗೇಶ್ವರನ ಶರಣ ಚೆನ್ನಬಸವಣ್ಣನ ಕರುಣವುಳ್ಳವರಿಗಲ್ಲದೆ ಮಿಕ್ಕಿನ ಜಡಮತಿಗಳಿಗೆಂತು ಸಾಧ್ಯವಪ್ಪುದು ಕೇಳಿರಣ್ಣಾ.