Index   ವಚನ - 8    Search  
 
ಅಂಗಾಲಕಣ್ಣವರಾಗಬಹುದಲ್ಲದೆ ಮೈಯೆಲ್ಲ ಕಣ್ಣವರಾಗಬಾರದು. ಮೈಯೆಲ್ಲ ಕಣ್ಣವರಾಗಬಹುದಲ್ಲದೆ ನೊಸಲ ಕಣ್ಣು ಚತುರ್ಭುಜರಾಗಬಾರದು. ನೊಸಲಕಣ್ಣು ಚತುರ್ಭುಜದವರಾಗಹುದಲ್ಲದೆ ಪಂಚವಕ್ತ್ರ ದಶಭುಜದವರಾಗಬಾರದು. ಪಂಚವಕ್ತ್ರ ದಶಭುಜದವರಾಗಬಹುದಲ್ಲದೆ ಸರ್ವಾಂಗಲಿಂಗಿಗಳಾಗಬಾರದು. ಸರ್ವಾಂಗಲಿಂಗಿಗಳಾಗಬಹುದಲ್ಲದೆ, ಕಲಿದೇವಯ್ಯಾ, ನಿಮ್ಮ ಶರಣ ಬಸವಣ್ಣನಾಗಬಾರದೆಂದರಿದು, ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.