Index   ವಚನ - 34    Search  
 
ಅಯ್ಯಾ, ಮಾತೆ ಪಿತರಾಗಲಿ, ಸಹೋದರ ಬಂಧುಗಳಾಗಲಿ, ಅತ್ಯಂತ ಸ್ನೇಹದಲ್ಲಿ ಕೂಡಿದವರಾಗಲಿ, ಗುರುಕಾರುಣ್ಯವ ಪಡೆದು ಶಿವಸೋದರರಾಗಲಿ, ಶಿವಾಚಾರ ಶಿವಕಾರ್ಯಕ್ಕೆ ಸಹಕಾರಿಗಳಲ್ಲದೆ ವಕ್ರವಾದವನು ಮಾತಿನಲ್ಲಿ ನಿರಾಕರಿಸಿ ನುಡಿಯದೆ, ಮನದಲ್ಲಿ ಪತಿಕರಿಸಿ ಕೂಡಿಸಿಕೊಂಡು ನಡೆದೆನಾದಡೆ, ಅಘೋರನರಕದಲ್ಲಿಕ್ಕು ಕಲಿದೇವಯ್ಯಾ.