Index   ವಚನ - 45    Search  
 
ಅಷ್ಟತನುವಿನಲ್ಲಿ ಹುಟ್ಟಿದ ನಿಷ್ಠಾಪರದಲ್ಲಿ, ಮುಟ್ಟುವ ಭರದಲ್ಲಿ, ವಿದ್ಯೆಯೊಳಗಣ, ಧಾರಾಮಂಟಪದೊಳಗಣ ಸಹಜವನರಿದಂಗಲ್ಲದೆ ಲಿಂಗವೆನಬಾರದು, ಜಂಗಮವೆನಬಾರದು, ಪ್ರಸಾದವೆನಬಾರದು. ಧಾರಾಮಂಟಪದೊಳಗಣ ಸಹಜವನರಿಯದೆ ಕರಣಂಗಳಿಗೆ ಗುರಿಯಾದರು, ಕರಣಲಿಂಗಾರ್ಚಕರಾದರು. ಕರಣ ಮರಣ ತಪ್ಪದೆಂತೊ ? ಇದೆಲ್ಲವನತಿಗಳೆದು ನಿಜಲಿಂಗಾರ್ಚನೆಯ ತೋರಿ, ನಿಜೈಕ್ಯದೊಳಗಿರಿಸಿ ಬದುಕಿದಾತ ಬಸವಣ್ಣ ಕಾಣಾ ಕಲಿದೇವಯ್ಯ.