Index   ವಚನ - 170    Search  
 
ಜಾತಿ ನಾಲ್ಕುವಿಡದು ಜಂಗಮವ ಮಾಡಬೇಕೆಂಬ ಗುರುದ್ರೋಹಿಯ ಮಾತ ಕೇಳಲಾಗದು. ಅದೆಂತೆಂದಡೆ:'ಯತ್ಕುಲಂ ಗುರುಮುಖಂ ಚೈವಂ ತತ್ಕುಯೋ ನಾಸ್ತಿಯೋದ್ಗುರುಃ 'ಯೋ ತತ್ಕುಲಂ' ಎಂದುದಾಗಿ. ಇಂತೆಂಬ ಶ್ರುತಿಯನರಿದು ಸಮಸ್ತ ಕುಲಗೋತ್ರ ಆಶ್ರಮ ನಾಲ್ಕ ಹೇಳಿ, ಕಳಸ ಪಂಚಕವನಿಕ್ಕಿ, ಹಲವು ಮಂತ್ರವಿಡಿದು ಮಾಡುವ ಭವಿಶೈವದೀಕ್ಷೆಯ ಅಂಗಲಿಂಗಸಂಬಂಧವನುಳ್ಳ ನಿಜವೀರಶೈವಕ್ಕೆ ಮಾಡುವ ಅಜ್ಞಾನಿಗಳಿಗೆ ರವಿಸೋಮರುಳ್ಳನ್ನಕ್ಕ ನರಕ ತಪ್ಪದೆಂದ, ಕಲಿದೇವಯ್ಯ.