Index   ವಚನ - 199    Search  
 
ಧರಿಸಿ ಭೋ, ಧರಿಸಿ ಭೋ ಮರ್ತ್ಯರೆಲ್ಲರು, ಮರೆಯದೆ ಶ್ರೀಮಹಾಭಸಿತವ. ಲೆಕ್ಕವಿಲ್ಲದ ತೀರ್ಥಂಗಳ ಮಿಂದ ಫಲಕಿಂದದು ಕೋಟಿಮಡಿ ಮಿಗೆ ವೆಗ್ಗಳ. ಲೆಕ್ಕವಿಲ್ಲದ ಯಜ್ಞಂಗಳ ಮಾಡಿದ ಫಲಕಿಂದದು ಕೋಟಿಮಡಿ ಮಿಗೆ ವೆಗ್ಗಳ. ಅದೆಂತೆಂದಡೆ: ಭೀಮಾಗಮದಲ್ಲಿ- ಸರ್ವತೀರ್ಥೇಷು ಯತ್ಪುಣ್ಯಂ ಸರ್ವಯಜ್ಞೇಷು ಯತ್ಫಲಂ| ತತ್ಫಲಂ ಕೋಟಿಗುಣಿತಂ ಭಸ್ಮಸ್ನಾನಂ ನ ಸಂಶಯಃ|| ಇಂತೆಂದುದಾಗಿ, ಧರಿಸಿ ಭೋ, ಧರಿಸಿ ಭೋ ಮರ್ತ್ಯರೆಲ್ಲರು, ಮರೆಯದೆ ಶ್ರೀಮಹಾಭಸಿತವ. ನಮ್ಮ ಕಲಿದೇವರ ನಿಜಚರಣವ ಕಾಣುದಕ್ಕೆ ಶ್ರೀಮಹಾಭಸಿತವೆ ವಶ್ಯ ಕಾಣಿ ಭೋ.