Index   ವಚನ - 210    Search  
 
ನಾವು ಸದ್ವೀರಮಾಹೇಶ್ವರರೆಂದು ಹೇಳುವ ಅಣ್ಣಗಳಿರಾ ನಿಮ್ಮ ವೀರಮಾಹೇಶ್ವರತ್ವದ ಕುರುಹ ಹೇಳಿರಣ್ಣ. ಅರಿಯದಿರ್ದಡೆ ಸದ್ವೀರಮಾಹೇಶ್ವರತ್ವದ ಕುರುಹ ಕೇಳಿರಣ್ಣ. ಪಂಚಮಹಾಪಾತಕಂಗಳ ಬೆರಸದೆ, ಪೂರ್ವವಳಿದು ಪುನರ್ಜಾತರಾದ ಸದ್ಭಕ್ತರಲ್ಲಿ ಪಂಚಸೂತಕಂಗಳ ಕಲ್ಪಿಸದೆ, ಪಂಚಾಚಾರಂಗಳ ಭೇದಿಸಿ, ಅನಾಚಾರಂಗಳ ಸಂಹರಿಸಿ, ತನ್ನ ನಿಜಚಿತ್ಕಳೆಗಳ ತೋರಿಸಿ, ಅವರ ಗೃಹವ ಪೊಕ್ಕು, ಪಾದೋದಕಪ್ರಸಾದವ ಕೊಟ್ಟು ಕೊಳಬಲ್ಲಾತನೆ ಸದ್ವೀರಮಾಹೇಶ್ವರ ನೋಡಾ. ಕಲಿದೇವರದೇವಾ.