Index   ವಚನ - 219    Search  
 
ನೆನೆವೆನಯ್ಯಾ, ಲೋಹ ಪರುಷದ ಸಂಗದಂತಾಯಿತ್ತಾಗಿ. ಬಸವಾ ಬಸವಾ ಬಸವಾ ಎಂಬ ಶಬ್ದದೊಳಗೆ ಎನ್ನ ಗಮನ ನಿರ್ಗಮನವಾಯಿತ್ತು. ಬಸವಾ ಎಂದೆನಯ್ಯಾ ಕಲಿದೇವರದೇವಾ, ಕಿಡಿಗೊಂಡ ಸರಗಿನ ಸಂಗದಂತಾಯಿತ್ತಾಗಿ.