Index   ವಚನ - 220    Search  
 
ಪಕ್ಕ ಮುರಿದ ಕೋಳಿಯಂತೆ ಬೆಕ್ಕಿನ ಬಾಧೆಗೆ ಸಿಕ್ಕಬೇಡವೆಂದು, ಗುರುಲಿಂಗಜಂಗಮದ ಪಾದತೀರ್ಥಪ್ರಸಾದದ ದಿಕ್ಕ ತೋರೆ, ದೀಕ್ಷೆಯ ಕೊಟ್ಟ, ಮಾರ್ಗವ ಮೀರಿ, ಮರಳಿ ಮಕ್ಕಳು ಮಾತಾಪಿತರು ಬಂಧುಗಳು ಭವಿಗಳಾಗಿರಲು, ಅವರ ಮುಖವ ಬಿಡಲಾರದೆ ಕೂಳಿನಾಸೆ ಮಾಡಿ ಹೋದೆನೆಂದಡೆ, ಕೋಳಿ ತಾನು ಬೆಕ್ಕು ನಾಯಿ[ಯಿದ್ದ]ಗೃಹಕೆ ಗುಟುಕ ಕೊಳಹೋದ ತೆರನಾಯಿತ್ತು, ಕಲಿದೇವರದೇವಯ್ಯ.