Index   ವಚನ - 237    Search  
 
ಬಕಾರವೆ ಗುರುವಯ್ಯಾ, ಸಕಾರವೆ ಲಿಂಗವಯ್ಯಾ, ವಕಾರವೆ ಜಂಗಮವಯ್ಯಾ, ಅದೆಂತೆಂದಡೆ: ಬಕಾರಂ ಗುರುರೂಪಂ ಚ ಸಕಾರಂ ಲಿಂಗಮೂರ್ತಿಃ| ವಕಾರಂ ಚರಮಾಖ್ಯಾತಂ ತ್ರಿವಿಧಂ ತತ್ತ್ವ ನಿಶ್ಚಯಂ|| ಇಂತೆಂದುದಾಗಿ. ಉದಯ ಮಧ್ಯ ಸಾಯಂಕಾಲದಲ್ಲಿ, ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆವ ಮಹಾಮಹಿಮರ ತೋರಾ, ಕಲಿದೇವರದೇವ.