Index   ವಚನ - 250    Search  
 
ಬಿತ್ತು ಬೆಳಸು ಸರ್ವಜೀವಕೀವನೊಬ್ಬನೆ. ಮತ್ತೆ ಮರಳಿ ಅನ್ಯದೈವಕ್ಕೆರಗಬೇಕೊ? ಪೃಥ್ವೀರಾಜವನಾಳುವವರು, ಕಾದಿ ಹೋದವರ ಗೋತ್ರವಧೆಯಂ ಮಾಡಿ, ಸತ್ತುಹೋದ ಪಾಂಡವರು. ಜಗಕ್ಕೆ ಬಿತ್ತು ಬೆಳೆಯ ಕೊಟ್ಟನೆಂಬ ನೀತಿಹೀನರ ನುಡಿಯ ಕೇಳಲಾಗದೆಂದ, ಕಲಿದೇವರದೇವ.