Index   ವಚನ - 264    Search  
 
ಭಾವಮೂರ್ತಿಯಾಗಬೇಕು ಆದಿಲಿಂಗಕ್ಕೆ. ಅರಿವುಮೂರ್ತಿಯಾಗಬೇಕು ದಾಸೋಹಕ್ಕೆ. ಹರಿವುಮೂರ್ತಿಯಾಗಬೇಕು ಜಂಗಮಲಿಂಗಕ್ಕೆ. ಭಕ್ತಿಮೂರ್ತಿಯಾಗಬೇಕು ಪ್ರಸಾದಕ್ಕೆ. ನಿರ್ಭಾವಮೂರ್ತಿಯಾಗಬೇಕು ಅನುಭಾವಕ್ಕೆ. ಜ್ಞಾನಮೂರ್ತಿಯಾಗಬೇಕು ಸ್ವಾನುಭಾವಕ್ಕೆ. ಇಂತೀ ಪ್ರಜ್ವಲಿತವಾದ ತನುವಿನ ಸಂಗದಲಿರ್ಪ, ಕಲಿದೇವಯ್ಯ.