Index   ವಚನ - 265    Search  
 
ಮಡಿಯ ಹೇರಿದ ಕತ್ತೆ ಉಡುವೆತ್ತ ಬಲ್ಲುದು, ಉಡುವಾತ ಬಲ್ಲನಲ್ಲದೆ, ಕವಿಯ ಮಾತ ಕವಿ ಬಲ್ಲನು. ನಾಲಗೆ ಬಲ್ಲದು ರುಚಿಯ. ಭವದುಃಖಿಯೆತ್ತ ಬಲ್ಲನು ಲಿಂಗದ ಪರಿಯ. ಮಡಿವಾಳ ಮಡಿವಾಳ ಎಂದು ನುಡಿವುದು ಜಗವೆಲ್ಲ. ಹರಿಗೊಬ್ಬ ಮಡಿವಾಳನೆ? ಮಡಿಯಿತು ಕಾಣಾ ಈರೇಳು ಭುವನವೆಲ್ಲ, ಮಡಿವಾಳ ಮಾಚಯ್ಯನ ಕೈಯಲ್ಲಿ. ಮುಂದೆ ಮಡಿದಾತ ಪ್ರಭುದೇವರು, ಹಿಂದೆ ಮಡಿದಾತ ಬಸವಣ್ಣ. ಇವರಿಬ್ಬರ ಕರುಣದ ಕಂದನು ನಾನು ಕಲಿದೇವಯ್ಯಾ.