ಮೂರುಸ್ಥಲದ ಮೂಲವನರಿಯರು.
ಪುಣ್ಯಪಾಪವೆಂಬ ವಿವರವನರಿಯರು.
ಇಹಪರವೆಂಬುದನರಿಯರು.
ಇವರನೆಂತು ಮಹಂತಿನ ದೇವರೆಂಬೆನಯ್ಯಾ?
ಹೊನ್ನ ವಸ್ತ್ರದವನ ಬಾಗಿಲಕಾಯ್ವ ಪಶುಪ್ರಾಣಿಗಳ
ದೇವರೆನ್ನಬಹುದೇನಯ್ಯಾ?
ಜಗದ ಕರ್ತನ ವೇಷವ ಧರಿಸಿಕೊಂಡು,
ಸರ್ವರಿಗೆ ಬೇಡಿ ಕೊಟ್ಟಡೆ ಒಳ್ಳೆಯವ,
ಕೊಡದಿರ್ದಡೆ ಕೆಟ್ಟವನು.
ಪಾಪಿ ಚಾಂಡಾಲಿ ಅನಾಚಾರಿ ಎಂದು ದೂಷಿಸಿ,
ಒಳಹೊರಗೆಂದು ಬೊಗಳುವ ಮೂಳಮಾನವರಿಗೆ
ಮಹಂತಿನ ಆಚರಣೆ ಎಲ್ಲಿಯದೊ?
ಇಲ್ಲವೆಂದ, ಕಲಿದೇವರದೇವ.
Art
Manuscript
Music
Courtesy:
Transliteration
Mūrusthalada mūlavanariyaru.
Puṇyapāpavemba vivaravanariyaru.
Ihaparavembudanariyaru.
Ivaranentu mahantina dēvarembenayyā?
Honna vastradavana bāgilakāyva paśuprāṇigaḷa
dēvarennabahudēnayyā?
Jagada kartana vēṣava dharisikoṇḍu,
sarvarige bēḍi koṭṭaḍe oḷḷeyava,
koḍadirdaḍe keṭṭavanu.
Pāpi cāṇḍāli anācāri endu dūṣisi,
oḷahoragendu bogaḷuva mūḷamānavarige
mahantina ācaraṇe elliyado?
Illavenda, kalidēvaradēva.