Index   ವಚನ - 275    Search  
 
ಮೂರನೊಳಕೊಂಡು ಆರ ಮೀರಿ ನಿಂದ ಘನವನೇನೆಂಬೆನಯ್ಯಾ? ನುಡಿವಡೆ ವಾಚಾತೀತ, ನೋಡುವಡೆ ಕಂಗಳೆರಡೆಯ್ದವಯ್ಯಾ. ಮಹದ ಬೆಳಗೆ ತಾನಾಗಿ ನಿಂದ, ಮರುಳಶಂಕರದೇವರ ನಿಲವ, ಬಸವಣ್ಣನಿಂದ ಕಂಡು ಬದುಕಿದೆ ಕಾಣಾ, ಕಲಿದೇವರದೇವ.