ವೇದದಿಂದ ವೆಗ್ಗಳವಿಲ್ಲವೆಂಬಿರಿ, ವೇದ ಶಿವನ ಕಂಡುದಿಲ್ಲ.
ಶಾಸ್ತ್ರ [ದಿಂದ ವೆಗ್ಗಳವಿಲ್ಲ] ವೆಂಬಿರಿ, ಶಾಸ್ತ್ರ ಶಿವನ ಕಂಡುದಿಲ್ಲ.
ವೇದವೆಂಬುದು ವಿಪ್ರರ ಬೋಧೆ.
ಶಾಸ್ತ್ರವೆಂಬುದು ಸಂತೆಯ ಗೋಷ್ಠಿ.
ಅನುಭಾವದಿಂದ ತನ್ನೊಳಗಣ ತನುವ,
ತಾನರಿತಂಥ ಭಕ್ತರಿಂದ ವೆಗ್ಗಳವಿಲ್ಲವೆಂದ, ಕಲಿದೇವರದೇವಯ್ಯ.
Art
Manuscript
Music
Courtesy:
Transliteration
Vēdadinda veggaḷavillavembiri, vēda śivana kaṇḍudilla.
Śāstra [dinda veggaḷavilla] vembiri, śāstra śivana kaṇḍudilla.
Vēdavembudu viprara bōdhe.
Śāstravembudu santeya gōṣṭhi.
Anubhāvadinda tannoḷagaṇa tanuva,
tānaritantha bhaktarinda veggaḷavillavenda, kalidēvaradēvayya.