Index   ವಚನ - 335    Search  
 
ಹಾಗದಾಸೆಗಾಗಿ ಹದಿನೆಂಟು ಜಾತಿಯ ತಂದು ಶಿಷ್ಯರೆಂದು ಮಾಡುವ ಪರಿಯನೋಡಾ ಅವರ ಆದಿ ಮಧ್ಯಾಂತವನರಿಯದೆ ತಮ್ಮ ಪ್ರಾಣಲಿಂಗವ ಕೊಟ್ಟು ಲಿಂಗದ್ರೋಹಿಗಳಾದರು ಪ್ರಸಾದವ ಕೊಟ್ಟು ಪ್ರಸಾದದ್ರೋಹಿಗಳಾದರು ಪಂಚಾಚಾರವ ಹೇಳಿ ಪಂಚಮಹಾಪಾತಕಕ್ಕೆ ಒಳಗಾದರು ಈಷಣತ್ರಯವೆಂಬ ತ್ರಿವಿಧಕ್ಕೆ ಸಿಕ್ಕಿ ಸಾವಿರ ನರಕಿಗಳು ತಾವು ಗುರುವೆಂಬ ನಾಚಿಕೆ ಸಾಲದೆ ಹೇಳಾ ಕಲಿದೇವರದೇವಾ