Index   ವಚನ - 344    Search  
 
ಹೊರಗಿದ್ದಾನೆಂಬೆನೆ ಒಳಗು ತಾನೆ ನೋಡಾ. ಒಳಗಿದ್ದಾನೆಂಬೆನೆ ಹೊರಗು ತಾನೆ ನೋಡಾ. ಒಳಹೊರಗು ಸರ್ವಾಂಗ ಸನ್ನಹಿತವಾಗಿದ್ದ ಸಮರಸದ ಮಹಿಮನನು ತಿಳಿದು ನೋಡಾ. ಅಗಲಲಿಲ್ಲದ ಘನವ ಅಗಲಿದೆನೆಂಬ ಮಾತು, ಶಿವಶರಣರ ಮನಕೆ ಬಹುದೆ? ಮರಣವಿಲ್ಲದ ಮಹಿಮನ ನಿಲವ ತನ್ನಲ್ಲಿ ನೋಡಿ ಶರಣೆಂಬುದಲ್ಲದೆ ಮರೆಯಬಹುದೆ? ತೆರಹಿಲ್ಲದ ನಿಲವು. ಕಲಿದೇವರದೇವನು ಕರಸ್ಥಲದೊಳಗೆ ಅಯಿದಾನೆ ಕಾಣಾ, ಚನ್ನಬಸವಣ್ಣ.