ತನ್ನ ತಾನರಿಯದ ಆ ಅಖಂಡ ಮಹತ್ತತ್ತ್ವವೆ
ತನ್ನ ತಾನರಿದ ಚಿತ್ಕಳೆ ತಾನೇ.
ಆ ಚಿತ್ಕಳೆ ತಾನೇ ತಾನೆಂಬೊ ಅರಿವು ತನಗಾದಲ್ಲಿ
ತಾನೆಂಬುದೊಂದೇ ಎರಡಾಯ್ತು.
ತಾನೆಂಬುದೊಂದು ಈ ಎರಡು ಮೂರು ಕೂಡಿ
ಮೂರು ಒಂದೇ, ಒಂದೇ ಮೂರು,
ಚಿನ್ನಾದ ಚಿದ್ಬಿಂದು ಚಿತ್ಕಳೆ ಇವು ಮೂರು ತಾನೆ.
ತಾನೆ ತನ್ನ ಬಲ್ಲಾತ ಅಲ್ಲಮಪ್ರಭು
ನಿರಂಜನಮೂರ್ತಿ ನೀನಾಗಿರ್ದೆಯಲ್ಲ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.