Index   ವಚನ - 8    Search  
 
ಗುರುಶಿಷ್ಯರೆಂಬಲ್ಲಿ ಬೋಧೆ ಮೊದಲೇ ಇತ್ತು. ಇವು ಮೂರು ಒಂದಾಗಿರ್ದು ಒಂದು ಇಲ್ಲದೆ, ಒಂದು ಇಲ್ಲದಾ ಒಂದರೊಳಗೆ ಒಂದು ಒಂದೆಂಬ ಮಹಾಬಯಲವೆ ಚಿದ್‍ಬಯಲಾದೆಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.