Index   ವಚನ - 26    Search  
 
ಅನ್ಯವಿಲ್ಲದ ಅರ್ಚನವೆಂತೆಂದಡೆ: "ನಿಷ್ಕಲಂ ನಿಗಮಾತೀತಂ ನಿಶ್ಶೂನ್ಯಂ ಶೂನ್ಯಮೇವ ಚ | ನಿರಂಜನಂ ನಿರಾಕಾರಂ ಸಾಕಾರಂ ಪರದರ್ಶನಂ || ನೀರೂಪಂ ಸ್ವರೂಪಂ ಚೈವ ನಿರ್ಗುಣಂ ಸಗುಣಂ ತತಃ | ಅದೃಶ್ಯ ದೃಶ್ಯಮಹಾಂತ ಸ್ವಯಂಭೂ ಫ್ರಭುವೇ ನಮಃ || ಮತ್ಕಲಾಂ ಚಿತ್ಕಲಾಂ ಚೈವ ಚಿದ್ರೂಪಂ ಚಿನ್ಮಯಂ ತತಃ | ಚಿತ್‍ಪ್ರಕಾಶಂ ಅಖಂಡೇಶಂ ಇಷ್ಟಲಿಂಗಾಕರಂ ದ್ವಯಂ || ಪಾದ್ಯಮರ್ಘ್ಯಂ ಆಚಮನಂ ಸರ್ವದೇವಸಮಾಹಿತಃ | ತದ್ರೂಪಂ ಸಲಿಲಂ ಸ್ವಾಹಾ ಮದೇವಸ್ನಾನಮಾಚರೇತ್ || ಏಕಮೇವಭವೇನ್ಮಾತ್ರಂ ಏಕಮಾತ್ರಂ ಭವೇನ್ಮನುಃ | ಏಕಮಂತ್ರಂ ಷಡಕ್ಷರಂ ಷಡಕ್ಷರಂ ಷಡಾನನಃ || ಷಡಾನನಃ ಭವೇತ್ತತ್ತ್ವಂ ತತ್ತ್ವಾತೀತಂ ಅಸಂಖ್ಯಕಂ | ಯಥಾಚಿತ್ತಂ ತಥಾಕಾರಂ ತತ್ಫಲಂ ಸ್ವಶಿವಾರ್ಪಿತಂ ||'' ಇಂತೀ ಪರಿಯಲಿ ಜಲ ಗಂಧ ಪುಷ್ಪ ದೀಪ ಧೂಪ ನೈವೇದ್ಯ ತಾಂಬೂಲ ಮೊದಲಾದ ಅಷ್ಟವಿಧಾರ್ಚನೆ ಷೋಡಶೋಪಚಾರ ಸರ್ವವು ತಾ ಮುಂತಾಗಿ ತನ್ನ ನಿಜದಲ್ಲಿ ನಿವೇದಿಸಲದೇ ಸದಾಚಾರ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.