ನಿರ್ಬಯಲು ನಿರ್ಬಯಲು
ನಿರ್ಬಯಲೆ ಮಹಾಬಯಲು
ನಿರ್ಬಯಲೆ ಚಿದ್ಬಯಲಲೆ ಮಹಾಂತಯೋಗಿ. | ಪಲ್ಲ |
ಚಿತ್ಕಳೆಯು ಚಿತ್ಕಳೆಯು
ಚಿತ್ಕಳೆಯು ಚಿದ್ಬಿಂದು
ಚಿತ್ಕಳೆಯು ಚಿನ್ನಾದ ತಾನೆ ತಾನೆ.
ಚಿತ್ಕಳೆಯು ಕಳೆಯೊಳಗೆ
ಚಿತ್ಕಳೆಯು ಬಿಂದುದಿಸಿ
ಚಿತ್ಕಳೆಯ ನಾದವು ತಾನೆ ಮಹಾಂತಯೋಗಿ. | 1|
ನಾದ ಬಿಂದು ಕಳೆಯು
ಆದ ಮೂರೂ ಕೂಡಿ
ಭೇದವಿಲ್ಲದೆ ತಾನೊಂದಾಯಿತಲ್ಲಾ!
ಆಧಾರವೆರಡಾದ
ಮಹತ್ವ ಅದರೋಳೊಂದು
ಬೋಧರೂಪಾಗಿರ್ದ ಮಹಾಂತಯೋಗಿ. | 2|
ಮೂರು ಮೂರೆರಡಾಗಿ
ಮೂರು ತಾ ಬ್ಯಾರ್ಯಾಗಿ
ಆರು ಮೂರಕ್ಕೆ ಮೇಲಾಯಿತಲ್ಲಾ!
ಆರಾರಿನ್ನೂರ್ಹದಿ-
ನಾರಾದ ತತ್ವ ಮಹಾ
ಕಾರಣನೆ ಪರಬ್ರಹ್ಮ ಮಹಾಂತಯೋಗಿ. | 3|
ಆ ಮಹಾಕಾರಣದೊಳಗೆ
ತಾ ಮಹಾನಿರ್ಬಯಲಿರಲು
ಮಹಾ ಅಖಂಡ ರೂಪಾಯಿತಲ್ಲಾ!
ಈ ಮಹಾಲಿಂಗದ ಚಿ
ತ್ಪ್ರೇಮವೇ ಶ್ರೀಮಹಾದೇವಿ
ಕಾಮಿತ ಕಲ್ಪವೃಕ್ಷ ಮಹಾಂತಯೋಗಿ. | 4|
ತಾನೆ ತಾನೆರಡಾಗಿ
ತಾನೆರಡೊಂದಾಗಿ
ತಾನೆ ಮುಂದೊಂದು ರೂಪಾಯಿತಲ್ಲಾ!
ತಾನೆ ಮುಂದೊಂದಾದ
ತಾನೆ ಆ ವಸ್ತುವಿಗೆ
ತಾನಾರುಮುಖವಾದ ಮಹಾಂತಯೋಗಿ. | 5|
ಆರು ಮುಖಗಳು ತಾನೆ
ಆರು ಆಕೃತಿಯಾಗಿ
ಆರು ಕಲೆ ಆರು ಲಿಂಗಾಯಿತಲ್ಲಾ!
ಆರು ಲಿಂಗಾಂಗಕ್ಕೆ
ಆರು ಶಕ್ತಿಗಳಾಗಿ
ಆರಾರೊಂದಾಗಿರ್ದ ಮಹಾಂತಯೋಗಿ. | 6|
ಆರು ಅಧಿದೇವತರಿಂ
ಆರು ಭೂತಗಳು ಹುಟ್ಟಿ
ಮೂರು ಲೋಕವೆಂಬುದೊಂದಾಯಿತಲ್ಲಾ!
ಮೂರು ಲೋಕದೊಳಗೆ
ಈರೇಳು ಲೋಕಾಗಿ
ಮೇರು ಅವರ್ಕಾದ ಮಹಾಂತಯೋಗಿ. | 7|
ಆವರಣದಾವರಣ
ಈವರಣೆಂದ್ಹೇಳಕಾ
ಲಾವರಣದೊಳಗೈವತ್ತಾಯಿತಲ್ಲಾ!
ಆವರಣ ಈವರಣ
ಭಾವರಣ ಬಹುವರಣ
ಜೀವರಣ ತಾನಾದ ಮಹಾಂತಯೋಗಿ. | 8|
ಜೀವೇ ತಾ ಬ್ರಹ್ಮಾಂಡ
ಜೀವೇ ತಾ ಪಿಂಡಾಂಡ
ಜೀವೇ ತಾ ಸಚರಾಚರವಾಯಿತಲ್ಲಾ!
ಜೀವೇ ದೇವರ ದೇವ
ಜೀವೇ ಸಾವರ ಸಾವ
ಜೀವಕ್ಕೆ ಜೀವಾದ ಮಹಾಂತಯೋಗಿ. | 9|
ಜೀವಾತ್ಮ ಜೀವಾತ್ಮ
ಜೀವಾತ್ಮ ಅಂತರಾತ್ಮ
ಜೀವಾತ್ಮ ಪರಮಾತ್ಮವಾಯಿತಲ್ಲಾ!
ಜೀವಾತ್ಮ ಮಹಾತ್ಮ
ಜೀವಾತ್ಮ ಬಹುವಾತ್ಮ
ಜೀವಾತ್ಮ ಏಕಾತ್ಮ ಮಹಾಂತಯೋಗಿ. | 10|
ಕನ್ನೆಸುರಳಿಸಲೊಂದು
ಸೊನ್ನೆ ಮಂಡಲವಾಗಿ
ಸೊನ್ನೆ ಹನ್ನೊಂದು ರೂಪಾಯಿತಲ್ಲಾ!
ಹನ್ನೊಂದು ಹಲವಾಗಿ
ಇನ್ನೊಂದಿಲ್ಲಲ್ಲೆನಿಸಿ
ಕನ್ನೆ ಕಾರಣವಾದ ಮಹಾಂತಯೋಗಿ. | 11|
ಗೌರ ಗಂಭೀರ ಸುಧೆ
ಮೀರಿ ಬಗೆ ಬಗೆ ಸ್ವಾದ
ಹಾರೈಸಿ ಹಲವು ಬೀಜಾಯಿತಲ್ಲಾ!
ತಾರ ಅಷ್ಟತನುವು ಕೂಡಿ
ಸಾರ ಸಂಗ್ರಹ ಮಾಡಿ
ತೋರಿದಾ ಷಡ್ರಸವೊ ಮಹಾಂತಯೋಗಿ. | 12|
ಮಾಡಿಕೊಂಡುಣದಿರಲು
ಬೇಡಿಕೊಂಡುಣಬೇಕು
ಮಾಡಿ ಬೇಡುಂಬುದೆರಡಾಯಿತಲ್ಲಾ!
ನಾಡಕೃತ್ಯವ ನೋಡಿ
ಜೋಡು ಸೂತ್ರವ ಹೂಡಿ
ನಾಡ ನಾಡ ಹಡದಾತ ಮಹಾಂತಯೋಗಿ. | 13|
ಹಾಡೋದು ಆಡೋದು
ನೋಡೋದು ಓಡೋದು
ಕೂಡ್ರೋದು ಕಾಡೋದು ಒಂದಾಯಿತಲ್ಲಾ!
ಕಾಡು ಕತ್ತಲೆಯಾಗಿ
ಮೋಡ ಮರೆಗೊಂಡಿರಲು
ಜೋಡ ಅಗಲಿದಂತಾದ ಮಹಾಂತಯೋಗಿ. | 14|
ಮರವೆ ಅರವಿನೊಳಗಾಗಿ
ಅರವು ಮರವಿನೊಳಾಗಿ
ಅರವು ಮರವೆಂಬುವೆರಡಾಯಿತಲ್ಲಾ!
ಅರುವು ಮರವೆರಡರೊಳು
ನರ ನಾಗ ಸುರ ಅಸುರ
ಪರಿಪರಿ ಮನುಮುನಿಯಾದ ಮಹಾಂತಯೋಗಿ. | 15|
ಇಂತು ರೂಪಾಗಿರ್ದ-
ನಂತ ಕಾಲವು ಕಳಿಯೇ
ಎಂತಿರ್ದಂತಿರ್ದಂತಾಯಿತಯ್ಯಾ!
ಕಂತುಕೇಳಿಯೊಳಿರಲು
ಅಂತಕಾಂತಕನಾಗಿ
ಚಿಂತೆ ಚಿಂತಿಸಲಾದ ಮಹಾಂತಯೋಗಿ. | 16|
ಚಿಂತೆ ಘನವಾಗಲಿಕ್ಕೆ
ಎಂತಯ್ಯಯೆನಲು ತಾ
ನಂತರಂತರವಾಗಿ ಹೋಯಿತಲ್ಲಾ!
ಪಂಥ ಪಕ್ಷವು ಮೀರೆ
ಕಂತು ಹೇಯವು ತೋರೆ
ಚಿಂತೆ ಚಿಂತಾರತ್ ಮಹಾಂತಯೋಗಿ. | 17|
ಬಿಂದು ರೂಪಾಗಿ ನಾ
ಬಂದೆ ಯೋನಿಯೊಳಿಂದು
ಸಂದೇಹದೊಳಗೆ ಬೆರಗಾಯಿತಲ್ಲಾ!
ಅಂದವಳಿದಿರ್ದಲ್ಲಿ
ಮುಂದೆ ಸುಜ್ಞಾನವಾಯಿತು
ಬಂದ ಶ್ರೀಗುರುರಾಯ ಮಹಾಂತಯೋಗಿ. | 18|
ಹಲವು ಗುರುಮುಖದಿಂದೆ
ಹಲವು ಮಂತ್ರವ ಕೇಳಿ
ಹಲವು ಯೋಗ ಸಾಧನವಾಯಿತಲ್ಲಾ!
ಹಲವು ಮತದೊಳಗ್ಹೊಕ್ಕು
ಹಲವು ಸಿದ್ಧಿಯ ಪಡೆದು
ಹಲವು ಮಹತ್ವ ಆದಾತ ಮಹಾಂತಯೋಗಿ. | 19|
ಹಲವು ಮಹತ್ವದಲ್ಲಿ
ಹಲವು ಪೂಜೆಯಗೊಂಡು
ಹಲವರಿಗೆ ಪೂಜಿಸುವದಾಯಿತಲ್ಲಾ!
ಹಲವು ಮತದೊಳಗೊಂದು
ಸುಲಭ ಶಿವಮತವಿರಲು
ಚಲುವ ಅಷ್ಟಾವರಣದ ಮಹಾಂತಯೋಗಿ. | 20|
ಶಿವನ ಅಷ್ಟಾವರಣವೇ
ಶಿವಪದವಿಯೆನಿಸಿತ್ತು
ಶಿವಶರಣೆಂಬುವದೆರಡಾಯಿತಲ್ಲಾ!
ಶಿವಪದವಿಯೆಂಬುವದು
ಭವದ ಮಲಕಿನ ಕೀಲು
ಶಿವನ ನಿಜತತ್ವ ಆದ ಮಹಾಂತಯೋಗಿ. | 21|
ನಿಜತತ್ವಯೆಂಬುವದು
ಅಜಹರಿಗೆ ಅಳವಡದು
ಈ ಜನರ ಗಜವಿಜಿಗೆ ಬೆರಗಾಯಿತಲ್ಲಾ!
ಮಜರೆ ಮಹಾಜ್ಞಾನಕ್ಕೆ
ತ್ರಿಜಗ ತನ್ನೊಳಗಾಗಿ
ನಿಜಶರಣ ತಾನಾದ ಮಹಾಂತಯೋಗಿ. | 22|
ಶರಣನಾಚರಣೆಯು
ಮೆರೆಯುವ ಮಹಾನುಭಾವ
ಅರಿದು ಹೇಳುವದು ಕೇಳುವದು ಆಯಿತಲ್ಲಾ!
ಪರಿಪರಿಯ ನುಡಿಗಳು
ಪರಿಪರಿಯ ನಡೆಗಳು
ನಿರಹಂಕಾರದೊಳಿರ್ದ ಮಹಾಂತಯೋಗಿ. | 23|
ನಿರಹಂಕಾರದಲ್ಲಿ
ಅರವು ವಿಕಸನವಾಯಿತು
ಅರುವಿಗೆ ಅರುವು ಮೇಲಾಯಿತಲ್ಲಾ!
ಅರವು ಅಡಗಿದ ಬಳಿಕ
ಕುರುಹು ಕಾಣದೇ ಹೋಯಿತು
ಉರಿಯುಂಡ ಕರ್ಪುರವೋ ಮಹಾಂತಯೋಗಿ. | 24|
ಬಯಲ ನೆನವಿನೊಳಾದ
ಬಯಲುಬ್ರಹ್ಮಾಂಡದೊಳು
ಬಯಲೇ ಪಿಂಡಾಂಡಮಯವಾಯಿತಲ್ಲಾ!
ಬಯಲಬ್ರಹ್ಮವ ಬೀರಿ
ಬಯಲ ಮಡಿವಾಳ ಸಾರಿ
ಬಯಲೇ ನಿರ್ಬಯಲಾದ ಮಹಾಂತಯೋಗಿ. | 25|
Art
Manuscript
Music
Courtesy:
Transliteration
Nirbayalu nirbayalu
nirbayale mahābayalu
nirbayale cidbayalale mahāntayōgi. | Palla |
citkaḷeyu citkaḷeyu
citkaḷeyu cidbindu
citkaḷeyu cinnāda tāne tāne.
Citkaḷeyu kaḷeyoḷage
citkaḷeyu bindudisi
citkaḷeya nādavu tāne mahāntayōgi. | 1|
Nāda bindu kaḷeyu
āda mūrū kūḍi
bhēdavillade tānondāyitallā!
Ādhāraveraḍāda
mahatva adarōḷondu
bōdharūpāgirda mahāntayōgi. | 2|
Mūru mūreraḍāgi
mūru tā byāryāgi
āru mūrakke mēlāyitallā!
Ārārinnūr'hadi-
nārāda tatva mahā
kāraṇane parabrahma mahāntayōgi. | 3|
Ā mahākāraṇadoḷage
tā mahānirbayaliralu
mahā akhaṇḍa rūpāyitallā!
Ī mahāliṅgada ci
tprēmavē śrīmahādēvi
kāmita kalpavr̥kṣa mahāntayōgi. | 4|
Tāne tāneraḍāgi
tāneraḍondāgi
tāne mundondu rūpāyitallā!
Tāne mundondāda
tāne ā vastuvige
tānārumukhavāda mahāntayōgi. | 5|
Āru mukhagaḷu tāne
āru ākr̥tiyāgi
āru kale āru liṅgāyitallā!
Āru liṅgāṅgakke
āru śaktigaḷāgi
ārārondāgirda mahāntayōgi. | 6|
Āru adhidēvatariṁ
āru bhūtagaḷu huṭṭi
mūru lōkavembudondāyitallā!
Mūru lōkadoḷage
īrēḷu lōkāgi
mēru avarkāda mahāntayōgi. | 7|
Āvaraṇadāvaraṇa
īvaraṇend'hēḷakā
lāvaraṇadoḷagaivattāyitallā!
Āvaraṇa īvaraṇa
bhāvaraṇa bahuvaraṇa
jīvaraṇa tānāda mahāntayōgi. | 8|
Jīvē tā brahmāṇḍa
jīvē tā piṇḍāṇḍa
jīvē tā sacarācaravāyitallā!
Jīvē dēvara dēva
jīvē sāvara sāva
jīvakke jīvāda mahāntayōgi. | 9|
Jīvātma jīvātma
jīvātma antarātma
jīvātma paramātmavāyitallā!
Jīvātma mahātma
jīvātma bahuvātma
jīvātma ēkātma mahāntayōgi. | 10|
Kannesuraḷisalondu
sonne maṇḍalavāgi
sonne hannondu rūpāyitallā!
Hannondu halavāgi
innondillallenisi
kanne kāraṇavāda mahāntayōgi. | 11|
Gaura gambhīra sudhe
mīri bage bage svāda
hāraisi halavu bījāyitallā!
Tāra aṣṭatanuvu kūḍi
sāra saṅgraha māḍi
tōridā ṣaḍrasavo mahāntayōgi. | 12|
Māḍikoṇḍuṇadiralu
bēḍikoṇḍuṇabēku
māḍi bēḍumbuderaḍāyitallā!
Nāḍakr̥tyava nōḍi
jōḍu sūtrava hūḍi
nāḍa nāḍa haḍadāta mahāntayōgi. | 13|
Hāḍōdu āḍōdu
nōḍōdu ōḍōdu
kūḍrōdu kāḍōdu ondāyitallā!
Kāḍu kattaleyāgi
mōḍa maregoṇḍiralu
jōḍa agalidantāda mahāntayōgi. | 14|
Marave aravinoḷagāgi
aravu maravinoḷāgi
aravu maravembuveraḍāyitallā!
Aruvu maraveraḍaroḷu
nara nāga sura asura
paripari manumuniyāda mahāntayōgi. | 15|Intu rūpāgirda-
nanta kālavu kaḷiyē
entirdantirdantāyitayyā!
Kantukēḷiyoḷiralu
antakāntakanāgi
cinte cintisalāda mahāntayōgi. | 16|
Cinte ghanavāgalikke
entayyayenalu tā
nantarantaravāgi hōyitallā!
Pantha pakṣavu mīre
kantu hēyavu tōre
cinte cintārat mahāntayōgi. | 17|
Bindu rūpāgi nā
bande yōniyoḷindu
sandēhadoḷage beragāyitallā!
Andavaḷidirdalli
munde sujñānavāyitu
banda śrīgururāya mahāntayōgi. | 18|
Halavu gurumukhadinde
halavu mantrava kēḷi
halavu yōga sādhanavāyitallā!
Halavu matadoḷag'hokku
halavu sid'dhiya paḍedu
halavu mahatva ādāta mahāntayōgi. | 19|
Halavu mahatvadalli
halavu pūjeyagoṇḍu
halavarige pūjisuvadāyitallā!
Halavu matadoḷagondu
sulabha śivamataviralu
caluva aṣṭāvaraṇada mahāntayōgi. | 20|
Śivana aṣṭāvaraṇavē
śivapadaviyenisittu
śivaśaraṇembuvaderaḍāyitallā!
Śivapadaviyembuvadu
bhavada malakina kīlu
śivana nijatatva āda mahāntayōgi. | 21|
Nijatatvayembuvadu
ajaharige aḷavaḍadu
ī janara gajavijige beragāyitallā!
Majare mahājñānakke
trijaga tannoḷagāgi
nijaśaraṇa tānāda mahāntayōgi. | 22|
Śaraṇanācaraṇeyu
mereyuva mahānubhāva
aridu hēḷuvadu kēḷuvadu āyitallā!
Paripariya nuḍigaḷu
paripariya naḍegaḷu
nirahaṅkāradoḷirda mahāntayōgi. | 23|
Nirahaṅkāradalli
aravu vikasanavāyitu
aruvige aruvu mēlāyitallā!
Aravu aḍagida baḷika
kuruhu kāṇadē hōyitu
uriyuṇḍa karpuravō mahāntayōgi. | 24|
Bayala nenavinoḷāda
bayalubrahmāṇḍadoḷu
bayalē piṇḍāṇḍamayavāyitallā!
Bayalabrahmava bīri
bayala maḍivāḷa sāri
bayalē nirbayalāda mahāntayōgi. | 25|