Index   ವಚನ - 64    Search  
 
ಆ ಪರಶಿವನ ಚಿದ್ವಿಲಾಸದಿಂದಾದ ಇಹದೊಳಗೆ ನರನಾಗಿ ಅರುವುಹಿಡಿದು ಕುರುಹುಕಂಡವಂಗೆ ಗರ್ವವುಂಟೆ? ಅರುವು ಪಿಡಿಯದೆ ಕುರುಹುಗಾಣದೆ ಬರಿಯ ಬಾಯಿಲೆ ಬ್ರಹ್ಮವ ನುಡಿದರೆ ಬ್ರಹ್ಮನಾಗಬಲ್ಲರೆ? ಬ್ರಹ್ಮನಾದ ಮೇಲೆ ಇಮ್ಮನ ಎಲ್ಲಿಹದೊ? ತಾನು ಅದ್ವೈತನಾದ ಮೇಲೆ ದ್ವೈತವನಾಚರಿಸುವದುಂಟೆ? ತಾನೇ ನಿಜ ಸರ್ವವೂ ಸುಳ್ಳೆಂಬುದುಂಟೆ? ಅಹುದು ಅಲ್ಲ ಎಂಬುವುದುಂಟೆ? ಗುರುವ ಹಿಂದುಗಳೆದು, ಕಟ್ಟಿದಾ ಲಿಂಗವ ಬಿಟ್ಟು, ಜಂಗಮವ ಜರಿಯಲುಂಟೆ? ಅಖಂಡವ ತಿಳಿದು ಆ ಅಖಂಡವು ತಾನಾಗದೆ ಭಂಗಿ ಮುಕ್ಕಿದವನಂತೆ, ಅಂಗ ಬತ್ತಲೆಯಾಗಿ, ಮಂಗಮತಿಗೂಡಿ ಸಂಗವ ಸಂದು, ಒಂದಾಗದೆ ಭಂಗಾಗಿ ಹೋದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.