Index   ವಚನ - 77    Search  
 
ಬ್ರಹ್ಮನೆಂಬ ಪೂಜಾರಿಗೆ ಬ್ರಹ್ಮನೇ ಅಧಿದೈವನಾಗಿ ಪೂರ್ವದಿಕ್ಕಿನೊಳು ಭಕ್ತಿಸ್ಥಲವೆನಿಸಿತ್ತು. ವಿಷ್ಣುನೆಂಬ ಪೂಜಾರಿಗೆ ವಿಷ್ಣುವೆ ಅಧಿದೈವನಾಗಿ ಪಶ್ಚಿಮದಿಕ್ಕಿನೊಳು ಮಹೇಶ್ವರಸ್ಥಲವೆನಿಸಿತ್ತು. ರುದ್ರನೆಂಬ ಪೂಜಾರಿಗೆ ರುದ್ರನೇ ಅಧಿದೈವನಾಗಿ ದಕ್ಷಿಣದಿಕ್ಕಿನೊಳು ಪ್ರಸಾದಿಸ್ಥಲವೆನಿಸಿತ್ತು. ಈಶ್ವರನೆಂಬ ಪೂಜಾರಿಗೆ ಈಶ್ವರನೇ ಅಧಿದೈವನಾಗಿ ಉತ್ತರದಿಕ್ಕಿನೊಳು ಪ್ರಾಣಲಿಂಗಿಸ್ಥಲವೆನಿಸಿತ್ತು. ಸದಾಶಿವನೆಂಬ ಪೂಜಾರಿಗೆ ಸದಾಶಿವನೇ ಅಧಿದೈವನಾಗಿ ಊರ್ಧ್ವದಿಕ್ಕಿನೊಳು ಶರಣಸ್ಥಲವೆನಿಸಿತ್ತು. ಮಹಾದೇವನೆಂಬ ಪೂಜಾರಿಗೆ ಮಹಾದೇವನೇ ಅಧಿದೈವನಾಗಿ ಪಾತಾಳದಿಕ್ಕಿನೊಳು ಐಕ್ಯಸ್ಥಲವೆನಿಸಿತ್ತು. ಇಂತು ತತ್ವವನೆ ಅರಿತು ನನ್ನ ನಾ ಮರೆತು ನಿನ್ನೊಳು ಬೆರೆತೆನಾಗಿ ನೀ ನಾನೆಂಬ ಉಭಯ ಭೇದವನಳಿಸಿ ಸಂದಿಲ್ಲದೆ ಒಂದಾಗಿ ತೋರ್ದ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.