Index   ವಚನ - 15    Search  
 
ಶರೀರಘಟಕ್ಕೆ ಶಿಲೆಮೂರ್ತಿ ವಸ್ತುವಾಯಿತ್ತು, ಆತ್ಮಘಟಕ್ಕೆ ಅರಿವುಮೂರ್ತಿ ವಸ್ತುವಾಯಿತ್ತು. ನೇಮಘಟ ನಿತ್ಯಲಿಂಗವನರಿತು, ನಿತ್ಯಲಿಂಗ ಅನಿತ್ಯಲಿಂಗವನರಿತು, ಅನಿತ್ಯ ಚಿತ್ಪ್ರಕಾಶವನೆಯ್ದಿ, ಅದರ ಮರೆಯಲ್ಲಿ ಕುಡಿವೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.