Index   ವಚನ - 36    Search  
 
ಬೀಜವಿಲ್ಲದೆ ಬೆಳೆವುಂಟೆ, ಅಯ್ಯಾ? ನಾದವಿಲ್ಲದೆ ಶಬ್ದವುಂಟೆ, ಅಯ್ಯಾ? ದೃಷ್ಟಿಯಿಲ್ಲ[ದೆ] ಕಳೆ ಉಂಟೆ, ಅಯ್ಯಾ? ಅಂಗಸಹಿತವಾಗಿ ಸರ್ವಸಂಗವನರಿಯಬೇಕಲ್ಲದೆ, ನಿರಂಗ ಅಂಗದಲ್ಲಿ ಹೊಕ್ಕು ಸರ್ವಭೋಗಂಗಳ ಕಾಬುದಕ್ಕೆ ಇದೇ ದೃಷ್ಟ. ಬಂಗಾರದ ಒಡಲಿನಲ್ಲಿ ಬಣ್ಣ ನಿಂದು ಲೆಕ್ಕವಟ್ಟಂತೆ ಬಾಹಂತೆ, ಆತ್ಮನ ದೃಷ್ಟನ ಕಂಡು ಮತ್ತೆ ಆಧ್ಯಾತ್ಮವೆನಲೇಕೆ? ಘಟದ ಮಧ್ಯದಲ್ಲಿ ನಿಂದು ನುಡಿವುದೆ ಕ್ರೀಯೆಂದೆ, ಸದಾಶಿವಮೂರ್ತಿಲಿಂಗವನರಿವುದಕ್ಕೆ.