Index   ವಚನ - 37    Search  
 
ವಾಯು ಬಯಲೆಂದಡೆ ತಿರುಗುವ ಆಲವಟ್ಟದಲ್ಲಿ ಸಿಕ್ಕಿ ಕುರುಹುಗೊಂಬುತಿದ್ದಿತ್ತು. ಇಂತೀ ಕುರುಹಿಲ್ಲದೆ ಅರಿವ ಪರಿಯಿನ್ನೆಂತೊ? ಅರಿವ ಆತ್ಮ, ನಿಂದು ನುಡಿವಂಗದ ಕುರುಹಿನಲ್ಲಿದ್ದು ಮತ್ತೆ ತತ್ವವಾದ ಪರಿಯಿನ್ನೆಂತೊ? ತೋರುವ ತೋರಿಕೆ ಅಂಗಮಯವಾದ ಮತ್ತೆ ಕುರುಹ ಹಿಂಗಿ ಅರಿವ ಪರಿಯಿನ್ನೆಂತೊ? ಮೀರಿ ಕಾಬುದು ಮೂರು ತತ್ವದಿಂದ ಆಚೆಯಲ್ಲಿ. ಅಷ್ಟನರಿವ ತನಕ ಇಷ್ಟನರಿಯಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.