ಲಿಂಗಕ್ಕೆ ಜಂಗಮಪ್ರಸಾದವ ಕೊಡುವಲ್ಲಿ
ಹೆಣ್ಣು ಹೊನ್ನು ಮಣ್ಣಿನ ಹಂಗಿಲ್ಲದಂತಿರಬೇಕು.
ಗುರುವಿಂಗೆ ತನುವ ಸವೆದು ಮಾಡುವಲ್ಲಿ
ಕೇಣಸರ ಆತ್ಮತೇಜವಿಲ್ಲದಿರಬೇಕು.
ಲಿಂಗಕ್ಕೆ ಮನವ ಮುಟ್ಟಿಸುವಾಗ
ಸರ್ವಮಯದಾಸೆಯ ಪಾಶ ತಲೆದೋರದಿರಬೇಕು.
ಇಂತೀ ನಿಶ್ಚಯವನರಿತವಂಗೆ
ಸದಾಶಿವಮೂರ್ತಿಲಿಂಗದಂಗವೆ ಆಶ್ರಯ.
Art
Manuscript
Music
Courtesy:
Transliteration
Liṅgakke jaṅgamaprasādava koḍuvalli
heṇṇu honnu maṇṇina haṅgilladantirabēku.
Guruviṅge tanuva savedu māḍuvalli
kēṇasara ātmatējavilladirabēku.
Liṅgakke manava muṭṭisuvāga
sarvamayadāseya pāśa taledōradirabēku.
Intī niścayavanaritavaṅge
sadāśivamūrtiliṅgadaṅgave āśraya.