ಸಹಪಂತಿಯಲ್ಲಿ ತನ್ನ ಗುರುವೆಂದು ವಿಶೇಷವ ಮಾಡಲಾಗದು.
ಅದೆಂತೆಂದಡೆ:
ಆ ಗುರುವಿಂಗೂ ಆ ಶಿಷ್ಯಂಗೂ ಎರಡಿಟ್ಟು ಮಾಡೂದಕ್ಕೆ
ದೃಷ್ಟವ ತೋರಿದ ಮತ್ತೆ,
ದ್ರವ್ಯಂಗಳಲ್ಲಿ ವಿಶೇಷವಾಗಿ ಕೈದುಡುಕಿದಡೆ, ಮನ ಕೂರ್ತಡೆ
ಅದೆ ಕಿಲ್ವಿಷ, ಸದಾಶಿವಮೂರ್ತಿಲಿಂಗಕ್ಕೆ ಹೊರಗು.
Art
Manuscript
Music
Courtesy:
Transliteration
Sahapantiyalli tanna guruvendu viśēṣava māḍalāgadu.
Adentendaḍe:
Ā guruviṅgū ā śiṣyaṅgū eraḍiṭṭu māḍūdakke
dr̥ṣṭava tōrida matte,
dravyaṅgaḷalli viśēṣavāgi kaiduḍukidaḍe, mana kūrtaḍe
ade kilviṣa, sadāśivamūrtiliṅgakke horagu.