Index   ವಚನ - 51    Search  
 
ಗುರುಮೂರ್ತಿಯ ಕಳೆ ಜಂಗಮದಲ್ಲಿಪ್ಪುದು, ಜಂಗಮಮೂರ್ತಿಯ ಕಳೆ ಲಿಂಗದಲ್ಲಿಪ್ಪುದು, ಆ ಲಿಂಗದ ಕಳೆ ಅರಿದು ಮಾಡುವ ಭಕ್ತನಲ್ಲಿ ನಿತ್ಯನಿರಂಜನವಾಗಿ ಬೆಳಗುತ್ತಿಪ್ಪುದು, ಸದಾಶಿವಮೂರ್ತಿಲಿಂಗದ ಹೃದಯವು ತಾನಾಗಿ.