ಗುರುಚರದಲ್ಲಿ ಸೇವೆಯ ಮಾಡುವನ್ನಕ್ಕ
ಮೂರಕ್ಕೆ ಹೊರಗಾಗಿರಬೇಕು, ಮೂರಕ್ಕೆ ಒಳಗಾಗಿರಬೇಕು.
ಮೂರರ ಒಳಗೆ ಕಂಡು ಮೂರರ ಹೊರಗನರಿತು,
ನೆರೆ ನೀರನಾಗಿರಬೇಕು,
ಸದಾಶಿವಮೂರ್ತಿಲಿಂಗವ ಮೀರಬೇಕು.
Art
Manuscript
Music
Courtesy:
Transliteration
Gurucaradalli sēveya māḍuvannakka
mūrakke horagāgirabēku, mūrakke oḷagāgirabēku.
Mūrara oḷage kaṇḍu mūrara horaganaritu,
nere nīranāgirabēku,
sadāśivamūrtiliṅgava mīrabēku.