ಭಕ್ತಂಗೆ ವಿಶ್ವಾಸ, ಗುರುಚರಕ್ಕೆ ವಿರಕ್ತಿ,
ಭಕ್ತಂಗೆ ತ್ರಿವಿಧ ಕೂಡಿದ ಮಾಟ,
ವಿರಕ್ತಂಗೆ ತ್ರಿವಿಧ ಹೊರಗಾಗಿ ಆಟ,
ಭಕ್ತನ ನೆಮ್ಮುಗೆ ಗುರುಲಿಂಗಜಂಗಮದಲ್ಲಿ.
ಗುರುಚರವಿರಕ್ತನ ನೆಮ್ಮುಗೆ
ಸದಾಶಿವಮೂರ್ತಿಲಿಂಗದಲ್ಲಿ ಬೆಚ್ಚಂತಿರಬೇಕು.
Art
Manuscript
Music
Courtesy:
Transliteration
Bhaktaṅge viśvāsa, gurucarakke virakti,
bhaktaṅge trividha kūḍida māṭa,
viraktaṅge trividha horagāgi āṭa,
bhaktana nem'muge guruliṅgajaṅgamadalli.
Gurucaraviraktana nem'muge
sadāśivamūrtiliṅgadalli beccantirabēku.