ಬಂದಿತ್ತು ಬಾರದೆಂಬ ಸಂದೇಹವನಳಿದು ನಿಂದುದು,
ಲಿಂಗಕ್ಕೆ ಭರಿತಾರ್ಪಣ.
ಶರಣರ ಮುಖದಿಂದ ಸಂದುದು, ಲಿಂಗಕ್ಕೆ ಭರಿತಾರ್ಪಣ.
ತನ್ನಂಗಕ್ಕೆ ಕೊರತೆಯಾಗಿ ಶರಣರ ಪಂತಿಯಲ್ಲಿ
ಸಮಗ್ರವಾಗಿ ಸಂದುದು, ಲಿಂಗಕ್ಕೆ ಭರಿತಾರ್ಪಣ,
ಜಗಭರಿತನ ತೃಪ್ತಿ ಇಹಪರದ ಮುಕ್ತಿ,
ಸದಾಶಿವಮೂರ್ತಿಲಿಂಗದ ಅರ್ಪಿತದ ಗೊತ್ತು.
Art
Manuscript
Music
Courtesy:
Transliteration
Bandittu bārademba sandēhavanaḷidu nindudu,
liṅgakke bharitārpaṇa.
Śaraṇara mukhadinda sandudu, liṅgakke bharitārpaṇa.
Tannaṅgakke korateyāgi śaraṇara pantiyalli
samagravāgi sandudu, liṅgakke bharitārpaṇa,
jagabharitana tr̥pti ihaparada mukti,
sadāśivamūrtiliṅgada arpitada gottu.