Index   ವಚನ - 90    Search  
 
ಆಚಾರವೆಂಬ ಭಕ್ತ ಘಟವಾಗಿ, ಅರಿವೆಂಬ ಮೂರ್ತಿಜಂಗಮ ಪ್ರಾಣವಾಗಿ, ಉಭಯವು ಕೂಡಿ ಕಾಯಜೀವನಾಗಿ ನಡೆವಂತೆ, ಆಚಾರಕ್ಕೊಡಲಾಗಿ, ಅರಿವಿಂಗೆ ಆಶ್ರಯವಾಗಿ, ಈ ಉಭಯಗೂಡಿಪ್ಪ ಅಂಗವು ಸದಾಶಿವಮೂರ್ತಿಲಿಂಗವು ತಾನಾಗಿ.