Index   ವಚನ - 92    Search  
 
ಅಜ ಕೊಂಡ ಗ್ರಾಸದ ಮಲವ ಕುಕ್ಷಿಯಲ್ಲಿ ಹೊಕ್ಕು ಉರುಳಿಸಿದವರುಂಟೆ ಅಯ್ಯಾ? ಚೂರ್ಣಶಿಲೆಗೆ ಶ್ವೇತವ ಹೂಸಿದವರುಂಟೆ ಅಯ್ಯಾ? ಮುಳ್ಳಿಗೆ ಮೊನೆಯ, ಎಳ್ಳಿಗೆ ಎಣ್ಣೆಯ ತಂದಿರಿಸಿದವರುಂಟೆ ಅಯ್ಯಾ? ಅವು ತಮ್ಮ ಗೋತ್ರದ ವರ್ತನದ ಇರವು. ಇವಕ್ಕಿಂದವು ಕಡೆಯೆ? ಗುರುವಾದಡೆ ಗುರುಸ್ಥಲಕ್ಕೆ ತಪ್ಪದಂತಿರಬೇಕು. ಜಂಗಮವಾದಡೆ ತನ್ನಯ ಇರವು ಇದಿರಿನ ಇಂಗಿತವನರಿದು, ಅಂಬುಜಪತ್ರದಲ್ಲಿದ್ದ ಬಿಂದುವಿನಂತೆ ಅಲೇಪವಾಗಿರಬೇಕು. ಭಕ್ತನಾಗಿದ್ದಲ್ಲಿ ಉಭಯದ ಮಾರ್ಗವ, ಗುರುವಿನ ಚೊಕ್ಕೆಯವ, ಆ ಜಂಗಮದ ಅಪೇಕ್ಷೆಯ ಇದಿರಿಟ್ಟು ಕಾಣಿಸಿಕೊಂಡು, ಅವ ತಾನರಿಯದಂತಿರಬೇಕು. ಅದು ಭಕ್ತಿಮಾರ್ಗಕ್ಕೆ ತಲೆದೋರದ ಇರವು. ಆ ಗುಣ ಸದ್ಗತಿಯ ಸಾಧನ, ಸದಾಶಿವಮೂರ್ತಿಲಿಂಗದ ಅರಿಕೆ ತಾನೆ.