Index   ವಚನ - 102    Search  
 
ಗುರುಜಂಗಮಲಿಂಗ ಭಕ್ತಿಮಾರ್ಗಸ್ಥಲ ಸಮರ್ಪಣ: ಪೃಥ್ವಿಜ್ಞಾನ, ಅಪ್ಪುಜ್ಞಾನ, ತೇಜಜ್ಞಾನ, ವಾಯುಜ್ಞಾನ, ಆಕಾಶಜ್ಞಾನ, ತಮಜ್ಞಾನ, ಪರಿಪೂರ್ಣಜ್ಞಾನ, ದಿವ್ಯಜ್ಞಾನ, ಇಂತೀ ಜ್ಞಾನಂಗಳಲ್ಲಿ ಕಂಡು ದೇಹಧರ್ಮಗಳನರಿತು, ಪಿಂಡಪ್ರಾಣ ಅಂಗಲಿಂಗ ಸಂಯೋಗಸಂಪದದಲ್ಲಿ ನಿಂದು ನೋಡು, ಸದಾಶಿವಮೂರ್ತಿಲಿಂಗದಲ್ಲಿ ಕಳೆ ಬೆಳಗುತ್ತದೆ.