Index   ವಚನ - 104    Search  
 
ಉರಿಯ ಮಡುವಿನಲ್ಲಿ ಒಂದು ಜಲದ ಕುಸುಮ ಹುಟ್ಟಿ, ಹರಿಹರಬ್ರಹ್ಮಾದಿಗಳಿಗೆ ವಶವಲ್ಲ ನೋಡಾ. ಆ ಕುಸುಮದ ಎಸಳಿನ ಕೂಟಸ್ಥಲದಲ್ಲಿ ಕಪ್ಪು, ನಡುಮಧ್ಯದಲ್ಲಿ ತಮ ಕಪೋತವರ್ಣ, ಅದರ ತುದಿಯಲ್ಲಿ ನಾನಾ ವರ್ಣದ ಛಾಯೆ ಕೂಡಿ ಅಳಿವುತ್ತಿಹುದು. ಆ ಹೂವ ಒಂದೆ ಭೇದದಲ್ಲಿ ಕಿತ್ತು ಸದಾಶಿವಲಿಂಗದ ಪಾದದಲ್ಲಿರಿಸಲಾಗಿ, ಪದಕ್ಕೆ ಹೊರಗೆಂದು ಮಕುಟದ ಮೇಲೇರಿತ್ತು. ಇದು ಬಲ್ಲವರಾರು ಚೋದ್ಯವ ಹೇಳಿರಣ್ಣಾ!