Index   ವಚನ - 117    Search  
 
ಆ ದುರ್ಗದಲ್ಲಿದ್ದ ದೊರೆಗಳ ವಿರೋಧವನರಿದು, ಇದೆ ದುರ್ಗಕ್ಕೆ ಸಾಧ್ಯ ವೇಳೆಯೆಂಬುದನರಿತು, ಮಾಯಾಮಲಂ ನಾಸ್ತಿಯೆಂಬ ಮನ್ನೆಯ ಕಾಳಗವ ಹಿಡಿದು, ದುರ್ಗವ ಮುತ್ತಿ, ಕೈಯೊಳಗಾದರು ಮೂವರು ದೊರೆಗಳು. ನರಪತಿಯ ಅಂಡವ ಕಿತ್ತು, ಸುರಪತಿಯ ಕೈಯ್ಯ ಕಡಿದು, ಸಿರಿವುರಿಯೊಡೆಯನ ಕಣ್ಣ ಕಳೆದು, ಅರಿಗಳಿಲ್ಲಾ ಎಂದು ಅಭಿಮುಖವ ನಷ್ಟವ ಮಾಡಿ, ಊರ್ಧ್ವಮುಖವಾದ ಮಾಯಾಕೋಳಾಹಳಮಲಂ ನಾಸ್ತಿ, ಮನೆಯ ಭಾವರಹಿತ, ಅನುಪಮಭರಿತ ಸದಾಶಿವಮೂರ್ತಿಗಳಿಲ್ಲದೆ ನಿರಾಳವಾಯಿತ್ತು.