ನಿರಾಳದಲ್ಲಿ ನೀರಕೋಟೆಯನಿಕ್ಕಿ, ಬಯಲ ಅಗಳ ತೆಗೆದು,
ವಾಯುವ ತೆನೆ ಹೂಡಿ,
ಅಶ್ವರಾಜನೆಂಬ ಅರಸು ಪಟ್ಟಣಕ್ಕೊಡೆಯನಾಗಿ,
ಸೋಮಸೂರ್ಯವೀಧಿಗಳಲ್ಲಿ ಪಶ್ಚಿಮ ಕೇರಿಯ ಪೊಕ್ಕು,
ದಕ್ಷಿಣದಲ್ಲಿ ನಿಂದು, ಪೂರ್ವದಲ್ಲಿ ಪರಸ್ಥಾನವ ಮಾಡಿ,
ಉತ್ತರದ ಮಧ್ಯದಲ್ಲಿ ಸಿಂಹಾಸನಂ ಗೆಯಿದು,
ಸಕಲೇಂದ್ರಿಯ ನಾನಾ ವಿಷಯ ಪರಿವಾರದಲ್ಲಿ,
ಅರಿಗಳಿಗೆ ವಶವಲ್ಲದೆ ಸುಖಮಯನಾಗಿದ್ದ.
ಸದಾಶಿವಮೂರ್ತಿಲಿಂಗವು ನಿರಾಳವಾಯಿತ್ತು.