Index   ವಚನ - 128    Search  
 
ಇನ್ನೇವೆ? ನಾ ತಂದ ಬೆಂಕಿಯಲ್ಲಿ ಸರ್ವಾಂಗವಿಷದ ಚೇಳು ಬಿದ್ದು ಬೇವುತ್ತಿದೆ. ಹಿಡಿದು ತೆಗೆದೆಹೆನೆಂದಡೆ ಉರಿ ತಾಗಿದ ಚೇಳು ಎನ್ನ ಹೊಯ್ದಿತ್ತು. ಸತ್ತಿತ್ತೆಂಬ ನೋವು ಬಿಡದು, ಎನಗೆ ವಿಷ ತಾಗಿತ್ತೆಂಬ ಆಸೆ ಬಿಡದು. ಬಿಟ್ಟಡೆ ಸಮಯಕ್ಕೆ ದೂರ, ಹಿಡಿದಡೆ ಜ್ಞಾನಕ್ಕೆ ದೂರ, ಉಭಯದ ಬೇನೆಯಲ್ಲಿ ಬೇವುದು ಸದಾಶಿವಮೂರ್ತಿಲಿಂಗಕ್ಕೆ ದೂರ.