ಬೀಜ ಹುಟ್ಟುವ ತಿರುಳು ಒಳಗಿದ್ದಲ್ಲಿ,
ಮೇರಳ ಸಿಪ್ಪೆ ಮುಚ್ಚಿಯಲ್ಲದೆ
ಅಂಕುರದ ತಿರುಳಿಗೆ ಆದಿಯಿಲ್ಲ.
ತಿರುಳು ಅಂಕುರ ನಾಸ್ತಿಯಾದಲ್ಲಿ
ಸಿಪ್ಪೆ ಹುಟ್ಟುವುದಕ್ಕೆ ಉಭಯದ ತತ್ತಿಲ್ಲದಾಗದು.
ಅಲ್ಲಾ ಎಂದಡೆ ಕ್ರೀವಂತರೊಪ್ಪರು,
ಅಹುದೆಂದಡೆ ಅಮಲಿನ ಮಲಿನವಾಗದು.
ದಗ್ಧವಾದ ಪಟ ಸಾಭ್ರಕ್ಕೊದಗದು.
ಒಂದೆಂದು ಎರಡ ಕೂಡಿ ಸಂದನಳಿದಲ್ಲಿ ಲೆಕ್ಕ ನಿಂದಿತ್ತು.
ಸದಾಶಿವಮೂರ್ತಿಲಿಂಗವೆಂದಲ್ಲಿ
ಉಭಯನಾಮ ಲೀಯವಾಯಿತ್ತು.
Art
Manuscript
Music
Courtesy:
Transliteration
Bīja huṭṭuva tiruḷu oḷagiddalli,
mēraḷa sippe mucciyallade
aṅkurada tiruḷige ādiyilla.
Tiruḷu aṅkura nāstiyādalli
sippe huṭṭuvudakke ubhayada tattilladāgadu.
Allā endaḍe krīvantaropparu,
ahudendaḍe amalina malinavāgadu.
Dagdhavāda paṭa sābhrakkodagadu.
Ondendu eraḍa kūḍi sandanaḷidalli lekka nindittu.
Sadāśivamūrtiliṅgavendalli
ubhayanāma līyavāyittu.