ಕಾಮನ ಅಂಬಿನ ಕಣೆಯಲ್ಲಿ
ಮೂವರು ಬಾಲೆಯರು ಹುಟ್ಟಿದ ವಿವರ :
ಹಿಳಿಕಿನಲ್ಲಿ ತಾಯಿ ಹುಟ್ಟಿದಳು,
ಮಧ್ಯದಲ್ಲಿ ಮಗಳು ಹುಟ್ಟಿದಳು,
ಮೊನೆಯಲ್ಲಿ ಮೊಮ್ಮಗಳು ಹುಟ್ಟಿ
ಹೆತ್ತಾಯ ತಿಂದು ತಾಯಿಗೆ ಎಸರನೆತ್ತುತೈದಾಳೆ.
ಅವಳ ಕೊಲುವ ಧೀರರ ಇನ್ನಾರನು ಕಾಣೆ.
ಎನಗೆ ಗಂಡ ಎಮ್ಮವ್ವೆಯ ಮಗನೆಂದು ಸಂದಣಿಗೊಳುತ್ತವಳೆ.
ನಾವೆಲ್ಲರೂ ಕೇಳುವ ಬನ್ನಿ,
ಸದಾಶಿವಮೂರ್ತಿಲಿಂಗವ.