ಪೃಥ್ವಿಯ ಅಪ್ಪುವಿನ ಆಧಾರದಿಂದ ಬೀಜವೊಡೆದು ಬೆಳೆವಂತೆ,
ಅರಿದು ಅರಿಹಿಸಿಕೊಂಬ ಉಭಯದ ಮಧ್ಯದಲ್ಲಿ
ಜ್ಞಾನಶಕ್ತಿ ಕುರುಹಾಗಿ ಚಿದ್ಘನವಸ್ತು ಪತಿಯಾಗಿ.
ಉಭಯದಿಂದ ಕೂಡಿ ಮೇಲನರಿತಲ್ಲಿ
ಸದಾಶಿವಮೂರ್ತಿಲಿಂಗ ಬಚ್ಚಬಯಲು.
Art
Manuscript
Music
Courtesy:
Transliteration
Pr̥thviya appuvina ādhāradinda bījavoḍedu beḷevante,
aridu arihisikomba ubhayada madhyadalli
jñānaśakti kuruhāgi cidghanavastu patiyāgi.
Ubhayadinda kūḍi mēlanaritalli
sadāśivamūrtiliṅga baccabayalu.