Index   ವಚನ - 164    Search  
 
ಶರೀರವ ಕುರಿತಲ್ಲಿ ಸಾಧಕಾಂಗವ ನುಡಿಯಬೇಕು. ಆತ್ಮನ ಕುರಿತಲ್ಲಿ ಚಿದ್ಘನದಲ್ಲಿ ನಿಂದು ಒದಗಿ ಅಡಗಿರುವ ಠಾವ ನುಡಿಯಬೇಕು. ಇಂತೀ ಉಭಯದಿರವ ತಾನರಿತು ಅಂಗಕ್ಕೆ ಶಿಲೆ, ಆತ್ಮಂಗೆ ಓಗರವಾದಂತೆ, ಲೌಕಿಕಕ್ಕೆ ಆಚರಣೆ ಪರಮಾರ್ಥಕ್ಕೆ ಪರಂಜ್ಯೋತಿ ಪ್ರಕಾಶವಾಗಿರಬೇಕು, ಸದಾಶಿವಮೂರ್ತಿಲಿಂಗಕ್ಕೆ ಅಂಗವಾಗಿ ನಿರಂಗಕ್ಕೆ ಸಂಗವನೆಯ್ದಬೇಕು.