ಬೇರಿನ ಬಣ್ಣ ಇಂದುವಿನ ಕಳೆಕೊಂಡಂತಿರಬೇಕು.
ಶುಭ್ರದ ಪಟ ಷಡುವರ್ಣಕ್ಕೆ ಬಂದಂತೆ,
ಘಟದ ಸಂಗದಿಂದ ಸುವಸ್ತು ಇಂದ್ರಿಯಂಗಳಿಗೆ ಮುಖವಾಗಿ,
ಅರ್ಪಿಸಿಕೊಂಬವ ನೀನಾದೆಯಲ್ಲಾ
ಸದಾಶಿವಮೂರ್ತಿಲಿಂಗವೆ.
Art
Manuscript
Music
Courtesy:
Transliteration
Bērina baṇṇa induvina kaḷekoṇḍantirabēku.
Śubhrada paṭa ṣaḍuvarṇakke bandante,
ghaṭada saṅgadinda suvastu indriyaṅgaḷige mukhavāgi,
arpisikombava nīnādeyallā
sadāśivamūrtiliṅgave.